weekend ಗೆ ಅಂಥ ಮನೆಗೆ (ಬಿಜಾಪುರ) ಹೋಗಿದ್ದೆ ಅಲ್ಲಿ ಕಂಡ ಕೆಲವು ಪಂಚ ಲೈನ್ಸ್
೧) ಇದು ಕಂಡಿದ್ದು ಟ್ರಕ್ ಹಿಂದೆ
"ಗಾಡಿ ಹಿಂದೆ ಹೋದರೆ ಬರಿ ಧೂಳು,
ಹುಡುಗಿ ಹಿಂದೆ ಹೋದರೆ ಬರಿ ಗೋಳು "
೨) ಗೋಳ ಗುಮ್ಮ ಟ್ ಗಿಂತಲು ಫೇಮಸ್ ಇರೋ ಬಿಜಾಪುರದ ಆಟೋ ಹಿಂದೆ ಬರೆದಿದ್ದು
" ಲವ್ ಮಾಡಿ ಮದ್ವೆ ಆದ್ರೆ ಲವ್ ಸ್ಟೋರಿ,
ಲವ್ ಮಾಡಿ ಕೈ ಕೊಟ್ಟರೆ ಕ್ರೈಂ ಸ್ಟೋರಿ"
೩) ಕೊನೆಯದಾಗಿ ನನ್ನ colleague ಸಂದೇಶ್ (ಉಚ್ಚಾರಣೆ :- ಸಂದೆಸಾ ) ಹೇಳತಿದ್ದ, ಅವನ ಗಣಿತ ಶಿಕ್ಷಕರು ಹೇಳಿದಂತೆ
"ಈ ಜೀವನ ಒಂದು ಸುಂದರ ನಾಯಿ ಬಾಳು" . ಇದರಲ್ಲಿ ಅಡಗಿರೋ ಅರ್ಥ ಅಹಾಹಾಹ ......