Friday, October 30, 2009

ಈ ಕ್ಷಣಕ್ಕೆ ನನ್ನೀಮನವು ಗೆದ್ದಿದೆ

ನನ್ನೊಳಗಿನ ಮಾತು ಕೇಳಲು ನಾನು ಕಿವುಡನೆ?
ರಾತ್ರಿ ಎಂಬ ನಶೆ ಏರುತಿರಲು
ಛೆ! ನಾನು ಈ ಕವಿತೆಯೆಂಬ ಸಂಚಿನೊಳಗೆ ಕಳೆದು ಕೊಳ್ಳಲೆ?
ಎನುತಿದೆ ಮನಸ್ಸು
ಹೃದಯದ ಮಾತು ಅಷ್ಟು ನಿಷ್ಟುರವೇನು?
ಪದ ಪದ ಕೆಳಿದಂಥೆಲ್ಲ
ಶ್ರವಣವನ್ನು ಮುಚ್ಚುತಿಹುದು ನನ್ನೀ ಮನಸ್ಸು
ಒಡೆದ ಕನಸು ಗಳನೊಡನೆ ಬೆರೆತು
ದುಃಖ ವೆಂಬ ವಿಷ ಬೀರುತಿಹುದು
ನನ್ನೊಳಗಿನ ಪ್ರತಿ ಮಾತು
ಕನಸು ಎಂಬ ಬೀಜ ಬಿತ್ತಿ ಹೃದಯದೊಳಗೆ
ದುಃಖ ವೆಂಬ ಹೂವು
ಈ ಜೀವನದ ನೈಜತೆಯ ಸುವಾಸನೆ ಬಿರುತಿದೆ
ಆತ್ಮದಲ್ಲಿ ಹುಮ್ಮಸ್ಸು ಪುಟಿದೇಳುತಿರಲು
ಕಣ್ಣಿರು ಸುರಿಸುತಿದೆ ಮನವು
ಈ ಕ್ಷಣಕ್ಕೆ ನನ್ನೀಮನವು ಗೆದ್ದಿದೆ
ಈ ಕವಿತೆಯನ್ನು ನಿಲ್ಲಿಸುತಿಹೆನು

1 comments:

Rashmi said...

Thumba chennagidhe kavithe, kaviya manadhaladhindha.

Post a Comment